೫೫ ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಗುಲ್ಬರ್ಗಾ ನಗರದ ದೇವಿ ನಗರದಲ್ಲಿ ಕನ್ನಡ ಸೇನೆ ಕರ್ನಾಟಕ ತಾಲೂಕು ಘಟಕದ ವತಿಯಿಂದ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಂದ ಭರತನಾಟ್ಯ, ಸಂಗೀತ ಸ್ಪರ್ದೆ, ಹಾಗು ಕನ್ನಡ ಗೀತೆಗಳಿಗೆ ನೃತ್ಯ ಸ್ಪರ್ದೆ ಏರ್ಪಡಿಸಿ ಪುಟ್ಟ ಮಕ್ಕಳ ಪ್ರತಿಬೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಇಲ್ಲಿಯ ಕನ್ನಡ ಸೇನೆ ಕಾರ್ಯಕರ್ತರು ಆಯೋಜಿಸಿದ್ದರು.
ನಾಡ ತಾಯಿ ಭುಬನೆಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾಡಗಿತೆಯೊಂದಿಗೆ ಕಾರ್ಯಕ್ರಮವನ್ನು ಆರಂಬಿಸಲಾಯಿತು ಕಾರ್ಯಕ್ರಮದ ಗೌರವ ಅಧಕ್ಷತೆ ವಹಿಸಿದ್ದ ಗುಲ್ಬರ್ಗಾ ಉತ್ತರ ವಲಯ ಶಾಸಕರಾದ ಖಮರುಲ್ ಇಸ್ಲ್ಮಾ ಅವರು ಮಾತನಾಡಿ ರಾಜ್ಯದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಮತ್ತು ಕಡ್ಡಾಯ ಕನ್ನಡ ಅನುಷ್ಟಾನವಾಗುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರ ತುಂಬಾ ಮುಖ್ಯವಾದುದ್ದು ಈ ನಿಟ್ಟಿನಲ್ಲ್ಲಿ ಕನ್ನಡ ಸೇನೆ ಉತ್ತಮವಾದ ಚಟುವಟಿಕೆ ನಡೆಸುತ್ತಿದೆ ಎಂದರು ನಂತರ ಮಾತನಾಡಿದ ಕನ್ನಡ ಸೇನೆ ತಾಲ್ಲುಕಾ ಅಧ್ಯಕ್ಷ್ಯ ಸಂಗಮನಾಥ ಬಿ ಹಿರೇಗೌಡ ಮಾತನಾಡಿ ಕನ್ನಡದ ನೆಲ ಜಲ ಭಾಷೆ ವಿರುದ್ದ ಯಾರೇ ಚಟುವಟಿಕೆ ನಡೆಸಲಿ ಅಂತಹವರ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಂ ದಿ ಪಾಟೀಲ್, ಶಿವಶರಣಪ್ಪ ಖಣದಾಳ, ಜಿಲ್ಲಾ ನ್ಯಾವಾದಿಗಳ ಸಂಘದ ಅಧ್ಯಕ್ಷರಾದ ಡಿ ಎಸ ನಾಮದಾರ, ಪಿಏಸ್ಯ್ ಮಲ್ಲಿಕಾರ್ಜುನ ಬಂಡೆ ಸೇರಿದಂತೆ ಅನೇಕರು ಉಪಸ್ತಿತರಿದರು
nice......... done........... Karanatak kannadada jotte...... Bharat maate go nenpisona.....!Jai kannada.... Jai hind... Jai jawan jai kisan..!
ReplyDeletejai karnataka jai sangu anna
ReplyDelete